Courses Images

  UPSC ಮುಖ್ಯ ಪರೀಕ್ಷೆ - ೨೦೨೦ ರಲ್ಲಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಧನುಷ್ ಗೌಡ ಅವರ ಅನುಭವ..

  ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ೨೦೨೨

  ಉದ್ದೇಶಿತ ಸಮೂಹ: ಈಗಾಗಲೇ ಐಚ್ಛಿಕ ವಿಷಯ ಕನ್ನಡ ಸಾಹಿತ್ಯದಲ್ಲಿ ತರಗತಿಗಳನ್ನು ಪಡೆದು ಅಥವಾ ಸ್ವಾಭ್ಯಾಸ ಮಾಡಿ ಉತ್ತರಗಳನ್ನು ಬರೆಯಲಿಚ್ಛಿಸುವವರು.

  ಕೇಂದ್ರ ಲೋಕ ಸೇವಾ ಆಯೋಗವು ಆಯೋಜಿಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಐಚ್ಛಿಕ ವಿಷಯವೂ ಕೂಡ. ಸಾಮಾನ್ಯ ಅಧ್ಯಯನದಲ್ಲಿ ಮೂರು ಪತ್ರಿಕೆಗಳನ್ನು ಸೇರಿಸಿ ೩೦೦ ಅಂಕಗಳನ್ನು ಗಳಿಸಲು ಪರದಾಡಬೇಕಾಗುತ್ತದೆ. ಆದರೆ, ಕನ್ನಡ ಸಾಹಿತ್ಯದ ಎರಡೇ ಪತ್ರಿಕೆಗಳಲ್ಲಿ ೩೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆಯಬಹುದು.

  ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ತರಗತಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಉತ್ತರಗಳ ಬರವಣಿಗೆಯ ಅಭ್ಯಾಸ ಕೂಡ. ಅಭ್ಯರ್ಥಿಗಳು ಎಷ್ಟೇ ವಿಷಯಪಾರಂಗತರಿದ್ದರೂ ಉತ್ತರ ಬರೆಯುವ ಕ್ಷಮತೆ ಹಾಗೂ ವೇಗ ಇಲ್ಲದೇ ಹೋದರೆ ಜ್ಞಾನವೂ ಕೂಡ ತ್ಯಾಜ್ಯವಾಗುತ್ತದೆ.

  ಅಭ್ಯರ್ಥಿಗಳು ಇಡೀ ವರ್ಷ ಪೂರ್ವಭಾವಿ ಪರೀಕ್ಷೆಯ ಸಿದ್ಧತೆಯಲ್ಲಿ ನಿರತರಾದಾಗ ಐಚ್ಛಿಕ ವಿಷಯದ ಕಡೆಗಿನ ಗಮನ ಹಾಗೂ ಅಭಿರುಚಿ ಕಡಿಮೆಯಾಗುತ್ತ ಹೋಗುತ್ತದೆ. ಈ ರೀತಿಯಾಗಿ ವಿಷಯದ ಮೇಲಿನ ಹಿಡಿತವು ಕಡಿಮೆಯಾಗಿ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಾಗ ಇಡೀ ವಿಷಯವೇ ಹೊಸದಾಗಿ ಕಾಣಿಸುತ್ತದೆ. ಈ ಪ್ರಕ್ರಿಯೆಯಿಂದ ಹೊರಬರಲು ಹಾಗೂ ಮುಖ್ಯ ಪರೀಕ್ಷೆಯ ಸಮಯದಲ್ಲಿ ಸಿದ್ಧತೆಯ ಭಾರವನ್ನು ಕಡಿಮೆಗೊಳಿಸಲು ಪೂರ್ವಭಾವಿ ಪರೀಕ್ಷೆಗೂ ಮುನ್ನವೇ ಉತ್ತರಗಳನ್ನು ಬರೆಯುವ ವಿಧಾನವನ್ನು ಕಲಿತು, ಉತ್ತರಗಳ ಪ್ರಸ್ತುತತೆ ಹಾಗೂ ನಿಖರತೆಯನ್ನು ವೃದ್ಧಿಸಿಕೊಳ್ಳಬೇಕು.

  ಈ ದಿಶೆಯಲ್ಲಿ ಮ್ಯಾನಿಫೆಸ್ಟ್ ಐ.ಎ.ಎಸ್. ಎರಡು ಹಂತಗಳ ಪರೀಕ್ಷಾ ಸರಣಿಯನ್ನು ಹಮ್ಮಿಕೊಳ್ಳುತ್ತಿದೆ.

  ಮೊದಲನೇ ಹಂತ: ನವೆಂಬರ್ ೩ ರಿಂದ ಜನವರಿ ೧೪ ರವರೆಗೆ ೧೩ ಪರೀಕ್ಷೆಗಳು (೧೨೫ ಅಂಕಗಳ ಪರೀಕ್ಷೆಗಳು)

  ಎರಡನೇ ಹಂತ: ಪೂರ್ವಭಾವಿ ಪರೀಕ್ಷೆ-೨೦೨೨ ಹಾಗೂ ಮುಖ್ಯ ಪರೀಕ್ಷೆ-೨೦೨೨ರ ಮಧ್ಯದಲ್ಲಿ ೧೨ ಪರೀಕ್ಷೆಗಳು (೧೨೫ ಹಾಗೂ ೨೫೦ ಅಂಕಗಳ ಪರೀಕ್ಷೆಗಳು)

  ಈ ಎಲ್ಲ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸಿದ್ಧತೆ, ಮೌಲ್ಯಮಾಪನ, ಚರ್ಚೆ ಹಾಗೂ ಮಾರ್ಗದರ್ಶನದ ರೂವಾರಿ ಶ್ರೀ. ಮೃತ್ಯುಂಜಯ. ಶಿ. ನಾವಲಗಟ್ಟಿಯವರಾಗಿರುತ್ತಾರೆ. ಅವರ ಹತ್ತು ವರ್ಷದ ಸುದೀರ್ಘ ಅನುಭವದ ಸದುಪಯೋಗ ಪಡಿಸಿಕೊಂಡು ಮುಂಬರುವ ಮುಖ್ಯ ಪರೀಕ್ಷೆಯಲ್ಲಿ ೩೦೦ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ತಾವು ಯಶಸ್ವಿಯಾಗಿ, ತಮ್ಮ, ತಮ್ಮ ಕುಟುಂಬದ, ಕನ್ನಡ ನೆಲದ ಹಾಗೂ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಹಾರೈಸುತ್ತೇವೆ.

  ಪರೀಕ್ಷೆಗಳ ಆರಂಭ ದಿನಾಂಕ: ೦೩-೧೧-೨೦೨೧

  ಶುಲ್ಕ: ೧೨೦೦೦ ರೂ.

  ನಾಗರಿಕ ಸೇವಾ ಪರೀಕ್ಷೆ ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪುಸ್ತಕಗಳ ಪಟ್ಟಿ

   

   

  ಪುಸ್ತಕದ ಶೀರ್ಷಿಕೆ

  ಲೇಖಕರು

   

  1

  ಬೆಟ್ಟದ ಜೀವ

  ಶಿವರಾಮ ಕಾರಂತ

   

  ಮಾಧವಿ

  ಅನುಪಮ ನಿರಂಜನ

   

  3

  ಒಡಲಾಳ

  ದೇವನೂರು ಮಹಾದೇವ

   

  ದೇವರು

  ಎ ಎನ್ ಮೂರ್ತಿರಾವ್

   

  5

  ಸಣ್ಣ ಕತೆಗಳು

  ಜಿ ಎಚ್ ನಾಯಕ್

   

  ತುಘಲಕ್

  ಗಿರೀಶ್ ಕಾರ್ನಾಡ್

   

  7

  ಶೂದ್ರ ತಪಸ್ವಿ

  ಕುವೆಂಪು

   

  ಹೊಸಗನ್ನಡ ಕವಿತೆ

  ಜಿ ಎಚ್ ನಾಯಕ್ (ಆಯ್ದ ಕವಿತೆಗಳ ಜೆರಾಕ್ಸ್)

   

  9

  ಜಾನಪದ ಸ್ವರೂಪ

  ಹಾ ಮಾ ನಾಯಕ್

   

  ೧೦

  ಜನಪದ ಗೀತಾಂಜಲಿ

  ದೇ. ಜ. ಗೌ.

   

  11

  ಜನಪದ ಕಥೆಗಳು

  ಜೀ. ಎಂ. ಪರಮಶಿವಯ್ಯ

   

  ೧೨

  ಬೀದಿ ಮಕ್ಕಳು ಬೆಳೆದೋ

  ಕಾಳೇಗೌಡ ನಾಗವಾರ

   

  13

  ಸಾವಿರದ ಒಗಟುಗಳು

  ಇಮ್ರಾಪುರ (ಮುನ್ನುಡಿ ಹಾಗೂ ಆಯ್ದ ಒಗಟುಗಳ ಜೆರಾಕ್ಸ್)

   

  ೧೪

  ಪಂಪಭಾರತ ೧೨ನೇ ಮತ್ತು ೧೩ನೇ ಆಶ್ವಾಸ

  ಜೆರಾಕ್ಸ್

   

  15

  ಪಂಪನ ಸಮಸ್ತ ಭಾರತ

  ಎಲ್. ಬಸವರಾಜ

   

  ೧೬

  ಕನ್ನಡ ಸಾಹಿತ್ಯ ಚರಿತ್ರೆ (ಪಂಪ, ನಾಗಚಂದ್ರ, ಜನ್ನ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ದಾಸರು, ರತ್ನಾಕರವರ್ಣಿ)

  ತ. ಸು. ಶಾಮರಾಯ ಮತ್ತು ರಂ. ಶ್ರೀ. ಮುಗಳಿ

   

  17

  ವಡ್ಡಾರಾಧನೆ

  ಟಿ. ಕೇಶವ ಭಟ್ಟ

   

  ೧೮

  ವಚನ ಕಮ್ಮಟ

  ಕೆ. ಮರುಳಸಿದ್ದಪ್ಪ

   

  19

  ನಂಬಿಯಣ್ಣನ ರಗಳೆ

  ತೀ. ನಂ. ಶ್ರೀಕಂಠಯ್ಯ

   

  ೨೦

  ಕರ್ಣ ಪರ್ವ

  ಜೆರಾಕ್ಸ್

   

  21

  ಜನಪ್ರಿಯ ಕನಕ ಸಂಪುಟ

  ದೇ. ಜ. ಗೌ.

   

  ೨೨

  ಪುರಂದರದಾಸರ ಕೀರ್ತನೆಗಳು

  ಯಾವುದೇ ಸಂಕ್ಷೀಪ್ತ ಪುಸ್ತಕ

   

  23

  ಭರತೇಶ ವೈಭವ (1-೧೦ ಸಂಧಿ)

  ರತ್ನಾಕರವರ್ಣಿ

   

  ೨೪

  ಕನ್ನಡ ಭಾಷೆಯ ಚರಿತ್ರೆ

  ಎಂ. ಎಚ್. ಕೃಷ್ಣಯ್ಯ

   

  25

  ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ

  ಎಲ್. ಎಸ್. ಶೇಷಗಿರಿರಾವ್

   

  ೨೬

  ಭಾರತೀಯ ಕಾವ್ಯ ಮೀಮಾಂಸೆ

  ತೀ. ನಂ. ಶ್ರೀಕಂಠಯ್ಯ

   

  27

  ಕರ್ನಾಟಕ ಸಂಸ್ಕೃತಿ

  ವಿಕಿಪೀಡಿಯಾ

   

  ೨೮

  ಸಾಹಿತ್ಯ ವಿಮರ್ಶೆ

  ಸಿ. ಎನ್. ರಾಮಚಂದ್ರನ್

   

  29

  ಸಮಗ್ರ ಗದ್ಯ 1 ಮತ್ತು ೨

  ಜಿ. ಎಸ್. ಶಿವರುದ್ರಪ್ಪ

   

  ೩೦

  ಕಾವ್ಯಾರ್ಥ ಚಿಂತನ

  ಜಿ. ಎಸ್. ಶಿವರುದ್ರಪ್ಪ

   

  31

  ಕನ್ನಡ ಸಾಹಿತ್ಯ ಸಂಗಾತಿ

  ಕೀರ್ತಿನಾಥ ಕುರ್ತುಕೋಟಿ

   

  ೩೨

  ಕನ್ನಡ ರತ್ನಕೋಶ

  ಕನ್ನಡ ಸಾಹಿತ್ಯ ಪರಿಷತ್

   

   

  ಮೇಲಿನ ವಿಷಯಗಳಿಗೆ ಸಂಬಂಧಿಸಿದ ಮೈಸೂರು ವಿಶ್ವವಿದ್ಯಾಲಯ ಎಂ. ಎ. ನೋಟ್ಸ್ ಜೆರಾಕ್ಸ್