Courses Images

     

    ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮ

    ಉದ್ದೇಶಿತ ಸಮೂಹ: ನಾಗರಿಕ ಸೇವಾ ಮುಖ್ಯ ಪರೀಕ್ಷೆ ೨೦೨೦ ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಮೂರೇ ತಿಂಗಳಲ್ಲಿ ಕನ್ನಡ ಸಾಹಿತ್ಯವನ್ನು ಪುನರಾವರ್ತನೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳು.

    ಪ್ರತಿ ವರ್ಷವೂ ಐಚ್ಛಿಕ ವಿಷಯ-ಕನ್ನಡ ಸಾಹಿತ್ಯವು ಹತ್ತಾರು ಕನ್ನಡಿಗರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಫಲಗೊಳ್ಳಲು ಸಹಕಾರಿಯಗುತ್ತಿದೆ. ಆಳವಾದ ಅಧ್ಯಯನ ಹಾಗೂ ಸಮರ್ಪಕ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ವಿಷಯದಲ್ಲಿ ೩೦೦ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಮ್ಯಾನಿಫೆಸ್ಟ್ ಐಎಎಸ್, ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

    ಈ ವಿಷಯದ ಪಠ್ಯಕ್ರಮವನ್ನು ಕಡಿಮೆ ಸಮಯದಲ್ಲಿ ಅಭ್ಯಸಿಸುವುದು ಎಷ್ಟು ಮುಖ್ಯವೋ, ಉತ್ತರ ಬರೆಯುವ ಅಭ್ಯಾಸವನ್ನು ಮಾಡುವುದೂ ಅಷ್ಟೇ ನಿರ್ಣಾಯಕ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಅಧ್ಯಯನದ ಜೊತೆಗೆ ದಕ್ಷವಾಗಿ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಉತ್ತರ ಬರೆಯುವ ಅಭ್ಯಾಸವನ್ನು ಮಾಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

    ಉತ್ತರ ಬರೆಯುವುದು ಒಂದು ಕಲೆ, ಹಾಗೂ ಒಂದು ವಿಜ್ಞಾನವೂ ಕೂಡ. ವಿದ್ಯಾರ್ಥಿಗಳು ಈ ಎರಡೂ ಅಂಶಗಳನ್ನು ಮೈಗೂಡಿಸಲು ಈ ಕಾರ್ಯಕ್ರಮ ಬಹು ಉಪಯೋಗಕಾರಿಯಾಗಲಿದೆ.

    ನಮ್ಮ ೨೦೧೯ನೇ ಸಾಲಿನ ಪರೀಕ್ಷಾ ಸರಣಿಯಲ್ಲಿ ಭಾಗವಹಿಸಿದ ಶ್ರೀ ಜಗದೀಶ್ ಅಡಹಳ್ಳಿಯವರು ನಾಗರಿಕ ಸೇವಾ ಪರೀಕ್ಷೆ ೨೦೧೯ ರಲ್ಲಿ ೪೪೦ನೇrank ಪಡೆದು ಯಶಸ್ವಿಯಾಗಿದ್ದಾರೆ. ನಮ್ಮ ಪರೀಕ್ಷಾ ಸರಣಿಯ ಬಗ್ಗೆ ಅವರ ಅನಿಸಿಕೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

     

    ಕಾರ್ಯಕ್ರಮದ ರೂಪುರೇಷೆಗಳು ಈ ಕೆಳಗಿನಂತಿವೆ:

    • ಅಕ್ಟೋಬರ್ ೧೩ ರಿಂದ ಐಚ್ಛಿಕ ವಿಷಯ ಪರೀಕ್ಷೆಯ ದಿನದವರೆಗಿನ ಕಾರ್ಯಕ್ರಮ
    • ಪಠ್ಯಕ್ರಮದ ನಾಲ್ಕು ವಿಭಾಗಗಳ ನಾಲ್ಕು ಸುತ್ತಿನ ಪುನರಾವರ್ತನೆ
    • ಮೊದಲ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೧೨೫ ಅಂಕಗಳ ಅಣಕು ಪರೀಕ್ಷೆಗಳು
    • ಎರಡನೇ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ಮೂರನೇ ಸುತ್ತಿನಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ನಾಲ್ಕನೇ ಸುತ್ತಿನಲ್ಲಿ ಒಂದೇ ದಿನದಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ಒಟ್ಟು ೧೨ ಅಣಕು ಪರೀಕ್ಷೆಗಳು
    • ಪ್ರತಿ ಅಣಕು ಪರೀಕ್ಷೆಯ ಮೌಲ್ಯಮಾಪನ
    • ಪ್ರತಿ ಅಣಕು ಪರೀಕ್ಷೆಯ ಚರ್ಚೆ ಹಾಗೂ ಮೌಲ್ಯವರ್ಧನಾ ತರಗತಿಗಳು
    • ಮೌಲ್ಯಮಾಪನ ಹಾಗೂ ಚರ್ಚೆಯ ನಂತರ ಮುಖಾಮುಖಿ ಚರ್ಚೆಗೆ ಅವಕಾಶ

     

    ಕಾರ್ಯಕ್ರಮದ ವೇಳಾಪಟ್ಟಿ

    ಪರೀಕ್ಷೆ

    ದಿನಾಂಕ

    ದಿನ

    ಪ್ರಶ್ನೆಪತ್ರಿಕೆ ವಿಭಾಗ

    ಅಂಕ

     

    ೧೩-ಅಕ್ಟೋಬರ್ ೨೦

    ಮಂಗಳವಾರ (ಮ. ೨ ರಿಂದ)

    ಉತ್ತರ ಬರೆಯುವ ವಿಧಾನದ ತರಗತಿ

    ೨೦-ಅಕ್ಟೋಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೧ ವಿಭಾಗ-೧

    ೧೨೫

    ೨೭-ಅಕ್ಟೋಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೧ ವಿಭಾಗ-೨

    ೧೨೫

    ೦೩-ನವೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೨ ವಿಭಾಗ-೧

    ೧೨೫

    ೧೦-ನವೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೨ ವಿಭಾಗ-೨

    ೧೨೫

    ೧೭-ನವೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೧ ವಿಭಾಗ-೧

    ೨೫೦

    ೨೪-ನವೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೧ ವಿಭಾಗ-೨

    ೨೫೦

    ೦೧-ಡಿಸೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೨ ವಿಭಾಗ-೧

    ೨೫೦

    ೦೮-ಡಿಸೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೨ ವಿಭಾಗ-೨

    ೨೫೦

    ೧೫-ಡಿಸೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೧

    ೨೫೦

    ೧೦

    ೨೨-ಡಿಸೆಂಬರ್-೨೦

    ಮಂಗಳವಾರ (ಮ. ೨ ರಿಂದ)

    ಪತ್ರಿಕೆ-೨

    ೨೫೦

    ೧೧

    ಮುಖ್ಯ ಪರೀಕ್ಷೆ ವೇಳಾಪಟ್ಟಿ ಬಂದ ನಂತರ ನಿಗದಿಯಾಗುವುದು

    ಪತ್ರಿಕೆ-೧

    ೨೫೦

    ೧೨

    ಪತ್ರಿಕೆ-೨

    ೨೫೦

    ಶುಲ್ಕ: ೮೦೦೦ ರೂಪಾಯಿಗಳು

    ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ  9986945679