Courses Images

    UPSC ಮುಖ್ಯ ಪರೀಕ್ಷೆ - ೨೦೨೦ ರಲ್ಲಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಧನುಷ್ ಗೌಡ ಅವರ ಅನುಭವ..

    ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮ-೨೦೨೧

    ಉದ್ದೇಶಿತ ಸಮೂಹ: ನಾಗರಿಕ ಸೇವಾ ಮುಖ್ಯ ಪರೀಕ್ಷೆ ೨೦೨1 ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಮೂರೇ ತಿಂಗಳಲ್ಲಿ ಕನ್ನಡ ಸಾಹಿತ್ಯವನ್ನು ಪುನರಾವರ್ತನೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳು.

    ಪ್ರತಿ ವರ್ಷವೂ ಐಚ್ಛಿಕ ವಿಷಯ-ಕನ್ನಡ ಸಾಹಿತ್ಯವು ಹತ್ತಾರು ಕನ್ನಡಿಗರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಫಲಗೊಳ್ಳಲು ಸಹಕಾರಿಯಗುತ್ತಿದೆ. ಆಳವಾದ ಅಧ್ಯಯನ ಹಾಗೂ ಸಮರ್ಪಕ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ವಿಷಯದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಮ್ಯಾನಿಫೆಸ್ಟ್ ಐಎಎಸ್, ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

    ಈ ವಿಷಯದ ಪಠ್ಯಕ್ರಮವನ್ನು ಕಡಿಮೆ ಸಮಯದಲ್ಲಿ ಅಭ್ಯಸಿಸುವುದು ಎಷ್ಟು ಮುಖ್ಯವೋ, ಉತ್ತರ ಬರೆಯುವ ಅಭ್ಯಾಸವನ್ನು ಮಾಡುವುದೂ ಅಷ್ಟೇ ನಿರ್ಣಾಯಕ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಅಧ್ಯಯನದ ಜೊತೆಗೆ ದಕ್ಷವಾಗಿ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಉತ್ತರ ಬರೆಯುವ ಅಭ್ಯಾಸವನ್ನು ಮಾಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

    ಉತ್ತರ ಬರೆಯುವುದು ಒಂದು ಕಲೆ, ಹಾಗೂ ಒಂದು ವಿಜ್ಞಾನವೂ ಕೂಡ. ವಿದ್ಯಾರ್ಥಿಗಳು ಈ ಎರಡೂ ಅಂಶಗಳನ್ನು ಮೈಗೂಡಿಸಲು ಈ ಕಾರ್ಯಕ್ರಮ ಬಹು ಉಪಯೋಗಕಾರಿಯಾಗಲಿದೆ.

    ಕಾರ್ಯಕ್ರಮದ ರೂಪುರೇಷೆಗಳು ಈ ಕೆಳಗಿನಂತಿವೆ:

    • ಅಕ್ಟೋಬರ್ 19 ರಿಂದ ಐಚ್ಛಿಕ ವಿಷಯ ಪರೀಕ್ಷೆಯ ದಿನದವರೆಗಿನ ಕಾರ್ಯಕ್ರಮ
    • ಪಠ್ಯಕ್ರಮದ ನಾಲ್ಕು ವಿಭಾಗಗಳ ನಾಲ್ಕು ಸುತ್ತಿನ ಪುನರಾವರ್ತನೆ
    • ಮೊದಲ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೧೨೫ ಅಂಕಗಳ ಅಣಕು ಪರೀಕ್ಷೆಗಳು
    • ಎರಡನೇ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ಮೂರನೇ ಸುತ್ತಿನಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ನಾಲ್ಕನೇ ಸುತ್ತಿನಲ್ಲಿ ಒಂದೇ ದಿನದಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ಸಂಚಾಲಕರಿಂದಲೇ ಪ್ರತಿ ಅಣಕು ಪರೀಕ್ಷೆಯ ಮೌಲ್ಯಮಾಪನ
    • ಪ್ರತಿ ಅಣಕು ಪರೀಕ್ಷೆಯ ಚರ್ಚೆ ಹಾಗೂ ಮೌಲ್ಯವರ್ಧನಾ ತರಗತಿಗಳು
    • ಮೌಲ್ಯಮಾಪನ ಹಾಗೂ ಚರ್ಚೆಯ ನಂತರ ಮುಖಾಮುಖಿ ಚರ್ಚೆಗೆ ಅವಕಾಶ

    ಶುಲ್ಕ: ೮೦೦೦ ರೂಪಾಯಿಗಳು

    ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ